ಶುದ್ಧ ಪಾರದರ್ಶಕ ಸರಳ ಸಜ್ಜನಿಕೆಯ ಹಸನ್ಮುಖಿ. ಅಪಾರ ಅನುಭವಿ ಎಲ್ಲರನ್ನೂ ಮುನ್ನಡೆಸುವ ದಿಟ್ಟ ನಾಯಕತ್ವ, ಸಮಾಜಮುಖಿ ಕಳಕಳಿ. ದುಡಿಮೆಗೆ ಮಹತ್ವ, ಶ್ರಮಕ್ಕೆ ಪ್ರಾಧಾನ್ಯತೆ ಬೆವರಿಗೆ ತಕ್ಕ ಫಲ. ಕಪಟವರಿಯದ ಸ್ನೇಹಜೀವಿ ರಂಗಜೀವಿ.
ಧರ್ಮತೀತ ಮಾನವತೆಯ ಮಹಾಪ್ರಜ್ಞೆ. ಅಪಾರ ಜ್ಞಾನಿ. ಸಮಾಜ ಸೇವ ಕಾರ್ಯನಿರತ ಸಂಘಜೀವಿ. ಸಂಘ ಸಂಸ್ಥೆಗಳ ನಾಡಿ ಮಿಡಿತವನ್ನರಿತ ಅನುಭವಿ. ಸಹಕಾರ ಸಂಸ್ಥೆಗಳ ಧುರೀಣ.
ಯಶಸ್ವಿ ಗೃಹಿಣಿ, ಪತಿಯ ಯಶಸ್ಸಿನ ಸೂತ್ರಧಾರಣಿ, ಸಂಯಮ ಸಹನಶೀಲತೆಯ ಸಾಧ್ವಿ. ಉತ್ಸಾಹಿ ಯುವ ಯಶಸ್ವಿ ಉದ್ಯಮಿ.
ಮಾಧ್ಯಮದ ಹಿರಿಯ ಅನುಭವಿ. ರಂಗ ಮಾಧ್ಯಮದ ಜನಪ್ರಿಯ ರಂಗ ಬ್ರಹ್ಮ. ಹಲವು ಹತ್ತು ಪ್ರಥಮಗಳ ನಿರ್ಮಾತೃ. ಹೊಸ ಮಾಧ್ಯಮ ಇತಿಹಾಸದ ಸೃಷ್ಟಿಕರ್ತ. ಸೃಜನಶೀಲ ಜನಪರ ಚಳುವಳಿಗಳ ಮತ್ತು ಸಮಾಜದ ಆಂತರ್ಯವನ್ನು ಅರಿತ ನಟ, ನಿರ್ದೇಶಕ, ಸಂಘಟಕ ಹಾಗೂ ಸಾಹಿತಿ.
ಕರ್ನಾಟಕದ ಕಲಾಮಾಧ್ಯಮದಲ್ಲಿ ಕನ್ನಡ ಪ್ರಮುಖ ಭಾಷೆಯಾಗಿ ಕರುನಾಡ ಸಾರಸ್ವತ ಲೋಕಕ್ಕೆ ಹೊಸ ಚೈತನ್ಯ ನೀಡಿದೆ ಭಾಷೆ ಗಡಿ ನೆಲ ಜಲ ಇತಿಹಾಸದ ಮೆಲುಕು ಪುರಾತನ ಕಾಲದ ಪುರಾಣ ಪ್ರಸಿದ್ಧ ಸ್ಥಳಗಳ ಚಿಂತನೆ ಭಕ್ತಿ ಪ್ರಧಾನ ಸಂಗೀತ ನಾಟಕ ಕಲೆ ಸಾಹಿತ್ಯ ಇವುಗಳ ಪೂರಕ ಚಿಂತನೆಯ ಮಹಾ ಸೌರಭ ನನ್ನ ಕೃಷಿ ಅದೇ ನನ್ನ ವಿಶ್ವಂ ವಾಹಿನಿಯ ಪ್ರೇರಣೆ
ಕನ್ನಡ ವಾಹಿನಿಯ ಮೂಲಕ ತಮ್ಮ ಜವಾಬ್ದಾರಿ ಕರ್ತವ್ಯ ನಿರ್ವಹಿಸುತ್ತಾ ವಾಹಿನಿಯ ಎಲ್ಲಾ ಕಾರ್ಯಕ್ರಮಗಳು ಮನೆ ಮನೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ತನ್ನ ಕಾಯಕದ ನಿಷ್ಠೆ ಶ್ರದ್ಧೆ ಆಸಕ್ತಿಯಾಗಿಸಿ ಕಾರ್ಯ ನಿರ್ವಹಿಸುವುದು ನನ್ನ ಪ್ರಮುಖ ಕಾರ್ಯವಾಗಿದೆ ಇದಕ್ಕಾಗಿ ಎಲ್ಲರೊಂದಿಗೆ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಿಸುವುದು ನನ್ನ ಆದ್ಯ ಕರ್ತವ್ಯ