ವಿಚಾರಿಸಿ
ಚಾಟ್ ಮಾಡಿ
ವಿಶ್ವಂ ಚಾನೆಲ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು, ದಯವಿಟ್ಟು ಸಂಪರ್ಕಿಸಿ: 9964502323 / ಇಮೇಲ್ : vishwammedia.tv@gmail.com

||   ನಿಗೂಢ ಜಗತ್ತಿನ ಪಯಣಕ್ಕೆ ಸಿದ್ಧರಾಗಿ   ||    ||  ಮನರಂಜನೆಯ ಹೊಸ ಆಯಾಮ   ||    ||  ಪ್ರತಿ ಹೆಜ್ಜೆಯೂ ವಿಭಿನ್ನ ವಿನೂತನ   ||

ವಿಶ್ವಂ ವೈಚಾರಿಕ ವಾಹಿನಿಯ ವಿಶೇಷ...

ಕರ್ನಾಟಕದಲ್ಲಿ ದೂರದರ್ಶನದಿಂದ ಪ್ರಾರಂಭವಾದ ವಾಹಿನಿಗಳ ಚಟುವಟಿಕೆ ನಂತರದಲ್ಲಿ ಖಾಸಗಿ ವಾಹಿನಿಗಳ ಪೈಪೋಟಿಯೊಂದಿಗೆ ವಿಸ್ತಾರವಾಗಿ ವ್ಯಾಪಿಸಿಕೊಂಡಿತು. ಈಗ ಹಲವು ಹತ್ತು ವಾಹಿನಿಗಳು ಕನ್ನಡಿಗರ, ಕರ್ನಾಟಕದ ಮನೆಮನೆಯನ್ನು ಆವರಿಸಿಕೊಂಡಿವೆ. ವಾಹಿನಿಗಳು ತಾವು ಕಾರ್ಯನಿರ್ವಹಿಸುವ ವಸ್ತು-ವಿಷಯಗಳ ಆಧಾರದ ಮೇಲೆ ಪ್ರಾಕಾರಗಳಾಗಿ ವಿಭಜನೆಗೊಂಡಿವೆ. ಮನರಂಜನೆ, ಸುದ್ದಿ, ಸಿನಿಮಾ, ಕ್ರೀಡೆ, ವಾಣಿಜ್ಯ, ಸಂಗೀತ, ಮಹಿಳೆ, ಆಧ್ಯಾತ್ಮಿಕ ಎನ್ನವ ಪ್ರಮುಖ ವಿಭಾಗಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲವುಗಳ ಉದ್ದೇಶವೆಂದರೆ ಮಾಹಿತಿ ಮತ್ತು ಮನರಂಜನೆ.

ಮಾಹಿತಿ ಮತ್ತು ಮನರಂಜನೆಯನ್ನು ಒಂದೇ ಸೂರಿನಡಿಯಲ್ಲಿ ಒದಗಿಸುವ ಸಂಕಲ್ಪದಲ್ಲಿ ಭರವಸೆಯೊದಿಗೆ ಬರುತ್ತಿದೆ ವಿಶ್ವಂ ವೈಚಾರಿಕ ವಾಹಿನಿ. ಯೋಗಕ್ಷೇಮ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಅಂಗಸಂಸ್ಥೆಯಾದ ವಿಶ್ವಂ ಟೀವಿ ಮಾಹಿತಿ,ಮನರಂಜನೆಯನ್ನು ದಿನನಿತ್ಯದ ಹೂರಣವಾಗಿ, ಹಿತಮಿತವಾಗಿ, ಸಹಜವಾಗಿ, ಸತ್ಯವೇ ಆಗಿರುವ , ಶುದ್ಧ ಮಾಹಿತಿಯೊಂದಿಗೆ ಪ್ರೇಕ್ಷಕರಿಗೆ ತಲುಪಿಸುವ ಸಂಕಲ್ಪವನ್ನು ಮಾಡಿದೆ.


ಹೇಳಿಕೆಗಳು

ಅತ್ಯಂತ ಸ್ಪರ್ಧಾತ್ಮಕ ಮತ್ತು ಉತ್ಪಾದಕ ಸೇವೆ

ನಮ್ಮ ಗುರಿ

ಮಿತಿಯ ಸಂಕೋಲೆಗಳನ್ನು ಮೀರಿದ ಮಾನವೀಯತೆ, ಮನುಷ್ಯತ್ವ,ಸಹಕಾರ, ಸಹಬಾಳ್ವೆ, ಸಹಿಷ್ಣುತೆ ಮತ್ತು ಸೋದರತ್ವದ ನೈಜ ದರ್ಶನ.ಸ್ವಾರ್ಥರಹಿತ ಸಮಾಜ ನಿರ್ಮಾಣ, ಸಂಸ್ಕೃತಿ, ಸದಾಚಾರಗಳ ಪುನರ್‌ಮನನ. ಒತ್ತಡರಹಿತ, ಸರಳ,ಶುದ್ಧ, ಆನಂದಭರಿತ ಜೀವನ ನಿರ್ಮಾಣದ ದೂರದೃಷ್ಟಿ.

ನಮ್ಮ ಉದ್ದೇಶ

ಉಪದೇಶವಲ್ಲದ, ನಾಟಕೀಯವಲ್ಲದ, ಕೃತಕತೆ, ವೈಭವೀಕರಣ, ಸಿದ್ಧ ಮನಸ್ಥಿತಿ, ಅತಿಕ್ರಮಣ ಧೋರಣೆ ಮತ್ತು ಕಪಟವಿಲ್ಲದ, ಆತ್ಮವಂಚನೆರಹಿತ, ಪಾರದರ್ಶಕ, ಸರಳ, ನಂಬಲರ್ಹವಾದ, ಸಂಶೋಧನಾತ್ಮಕ ಮಾಹಿತಿ ಮತ್ತು ಶುದ್ಧ ಮನರಂಜನೆಯ ಮೂಲಕ ಹೊಸ ಜಗತ್ತಿನ ಅನಾವರಣ.

ನಮ್ಮ ಸಿದ್ದಾಂತ

ನಾವು ಮಾಡಬಹುದಾದ ಮಹತ್ವದ ಸಂಗತಿಯನ್ನೇ ಹೇಳುವುದು, ನಾವೇ ಬುದ್ಧಿವಂತರೂ ಮಾತ್ರವಲ್ಲ ಎನ್ನುವ ಆತ್ಮಜಾಗೃತಿ. ತಪ್ಪುಮಾಹಿತಿ, ತಪ್ಪು ಕಲ್ಪನೆ, ಭಾವೋದ್ರೇಕ ಮತ್ತು ಅನಗತ್ಯ ಹೇರಿಕೆ ಬಿಟ್ಟು ನಾವೇ ಶ್ರೇಷ್ಠರೆನ್ನದ ವಿನೀತ ಭಾವ. ಎಲ್ಲಕ್ಕೂ ಎಲ್ಲ ಕಾಲಕ್ಕೂ ಉಳಿಯುವ ಶಾಶ್ವತ ಸತ್ಯದ ಅಧ್ಯಯನಶೀಲ ಮಾಹಿತಿ, ಶುದ್ಧ ಕನ್ನಡದ ಬಳಕೆ, ದೇಸಿ ಸಂಸ್ಕೃತಿಯ ಆರಾಧನೆ, ಶಾಸ್ತ್ರ- ಸಂಪ್ರದಾಯ, ಪದ್ಧತಿ, ಪರಂಪರೆಗಳ ಸಂರಕ್ಷಣೆ, ಪುರಾಣಗಳ ಪ್ರಧಾನ ಪೋಷಣೆ, ಎಲ್ಲ ರಂಗ ಕಲೆಗಳ ಸಮೀಕರಣ, ಸ್ತ್ರೀ ಸಮಾನತೆ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ ಆದ್ಯತೆ.

ವಿಶ್ವಂ ಲೈವ್ ಟಿವಿ

ನಾಯಕತ್ವ

ಆಡಳಿತ ಮಂಡಳಿ

ಹೆಚ್.ಎಸ್.ನಾರಾಯಣಸ್ವಾಮಿ

ಅಧ್ಯಕ್ಷರು

ರಾಮಚಂದ್ರ ರೆಡ್ಡಿ

ಉಪಾಧ್ಯಕ್ಷರು

ವೀಣಾ ನಾರಾಯಣ ಸ್ವಾಮಿ

ವ್ಯವಸ್ಥಾಪಕ ನಿರ್ದೇಶಕರು

ಡಾ. ಎಸ್.ಎಲ್.ಎನ್. ಸ್ವಾಮಿ

ಸಿ.ಇ.ಓ

ಎಂ ಜಗದೀಶ್ ಗೌಡ

ಕಾರ್ಯತಂತ್ರ ಮುಖ್ಯಸ್ಥರು

ಬಿ ಕೃಷ್ಣಮೂರ್ತಿ(ಕೇಬಲ್)

ಕಾರ್ಯತಂತ್ರ ಮುಖ್ಯಸ್ಥರು
ನಮ್ಮ ವಲಯಗಳು

ನಮ್ಮ ಇತ್ತೀಚಿನ ಪೋಸ್ಟ್ ಅನ್ನು ಅನ್ವೇಷಿಸಿ

ಇಂದಿನ ಕಾರ್ಯಕ್ರಮದ ವಿವರಗಳು

  • ವಿಶ್ವಮ್ ಟಿವಿಯ ಬಹುರೂಪಿ ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ ವಾಹಿನಿಯ ಸ್ಟುಡಿಯೋಗೆ ನೀಡಿದ್ದ ಹೆಸರಾಂತ ಮನೋ ಆರೋಗ್ಯ ತಜ್ಞರು, ಮಾನಸಿಕ ಚಿಕಿತ್ಸಾ ತಜ್ಞರಾದ ಮನೀಷ ಛಾಪವಾಲೆ, ಚೇತನಾ ಶ್ರೀನಿವಾಸ್ ಮತ್ತು ಸ್ವಾತಿ. ಈ ಸಂದರ್ಭದಲ್ಲಿ ಸಿಇಓ ಡಾ. ಎಸ್. ಎಲ್. ಎನ್. ಸ್ವಾಮಿ, ಅಭಿರಾಮ್ ರೆಡ್ಡಿ, ಭಾರತಿ ಪ್ರಕಾಶ್ ಗಣ್ಯರಿಗೆ ಸತ್ಕರಿಸಿದರು.