ವಿಚಾರಿಸಿ
ಚಾಟ್ ಮಾಡಿ
ವಿಶ್ವಂ ಚಾನೆಲ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು, ದಯವಿಟ್ಟು ಸಂಪರ್ಕಿಸಿ: 9964502323 / ಇಮೇಲ್ : vishwammedia.tv@gmail.com

ನಮ್ಮ ಬಗ್ಗೆ

ವಿಶ್ವಂ ವೈಚಾರಿಕ ವಾಹಿನಿಯ ವಿಶೇಷ...

ಕರ್ನಾಟಕದಲ್ಲಿ ದೂರದರ್ಶನದಿಂದ ಪ್ರಾರಂಭವಾದ ವಾಹಿನಿಗಳ ಚಟುವಟಿಕೆ ನಂತರದಲ್ಲಿ ಖಾಸಗಿ ವಾಹಿನಿಗಳ ಪೈಪೋಟಿಯೊಂದಿಗೆ ವಿಸ್ತಾರವಾಗಿ ವ್ಯಾಪಿಸಿಕೊಂಡಿತು. ಈಗ ಹಲವು ಹತ್ತು ವಾಹಿನಿಗಳು ಕನ್ನಡಿಗರ, ಕರ್ನಾಟಕದ ಮನೆಮನೆಯನ್ನು ಆವರಿಸಿಕೊಂಡಿದೆ. ವಾಹಿನಿಗಳು ತಾವು ಕಾರ್ಯನಿರ್ವಹಿಸುವ ವಸ್ತು-ವಿಷಯಗಳ ಆಧಾರದ ಮೇಲೆ ಪ್ರಾಕಾರಗಳಾಗಿ ವಿಭಜನೆಗೊಂಡಿವೆ. ಮನರಂಜನೆ, ಸುದ್ದಿ, ಸಿನಿಮಾ, ಕ್ರೀಡೆ, ವಾಣಿಜ್ಯ, ಸಂಗೀತ, ಮಹಿಳೆ, ಆಧ್ಯಾತ್ಮಿಕ ಎನ್ನವ ಪ್ರಮುಖ ವಿಭಾಗಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲವುಗಳ ಉದ್ದೇಶವೆಂದರೆ ಮಾಹಿತಿ ಮತ್ತು ಮನರಂಜನೆ.

ಮಾಹಿತಿ ಮತ್ತು ಮನರಂಜನೆಯನ್ನು ಒಂದೇ ಸೂರಿನಡಿಯಲ್ಲಿ ಒದಗಿಸುವ ಸಂಕಲ್ಪದಲ್ಲಿ ಭರವಸೆಯೊದಿಗೆ ಬರುತ್ತಿದೆ ವಿಶ್ವಂ ವೈಚಾರಿಕ ವಾಹಿನಿ. ಯೋಗಕ್ಷೇಮ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಸಂಸ್ಥೆಯಾದ ವಿಶ್ವಂ ಟೀವಿ ಮಾಹಿತಿ, ಮನರಂಜನೆಯನ್ನು ದಿನನಿತ್ಯದ ಹೂರಣವಾಗಿ, ಹಿತಮಿತವಾಗಿ, ಸಹಜವಾಗಿ, ಸತ್ಯವೇ ಆಗಿರುವ, ಶುದ್ಧ ಮಾಹಿತಿಯೊಂದಿಗೆ ಪ್ರೇಕ್ಷಕರಿಗೆ ತಲುಪಿಸುವ ಸಂಕಲ್ಪವನ್ನು ಮಾಡಿದೆ.

ಮಾಹಿತಿ, ಮನರಂಜನೆಯ ವಾಹಿನಿ ಇದೇ ಮೊದಲೇನಲ್ಲ ಹಾಗೂ ನಾವೇ ಮೊದಲಿಗರೇನಲ್ಲ. ಹೀಗೆ ಹೇಳಿಕೊಂಡು ದುಡಿದು ಹೆಸರು ಮಾಡಿದ ಹಲವು ವಾಹಿನಿಗಳ ಇತಿಹಾಸ ಕರ್ನಾಟಕದಲ್ಲಿದೆ. ಆದರೆ ಎಲ್ಲವನ್ನೂ ಮಾಡುವ ಆತುರದಲ್ಲಿ, ಗೊಂದಲದಲ್ಲಿ ಅಥವಾ ಏನನ್ನು..? ಹೇಗೆ..? ಎಷ್ಟನ್ನು ಯಾವ ಸಂದರ್ಭದಲ್ಲಿ ಕೊಡಬೇಕು ಎನ್ನುವ ಸಮ್ಮಿಶ್ರಣದ, ಸಂಯೋಜನೆಯ ಅಪರಾಧದಿಂದಾಗಿ ಅಥವಾ ಎಲ್ಲೋ ಮಾಡಿಕೊಂಡ ರಾಜಿಯಿಂದಾಗಿ ಈ ವಾಹಿನಿಗಳು ತನ್ನ ಛಾಪನ್ನು ಮೂಡಿಸಲು ಸಫಲವಾಗಲಿಲ್ಲ. ಇದು ಅಪರಾಧವಲ್ಲ ಅಥವಾ ಅಪಚಾರವೂ ಅಲ್ಲ. ಬದುಕಿ ಉಳಿಯುವ ಜಾಣ್ಮೆಯ ಸೂತ್ರ. ಆದರೆ ನಿರ್ಧಾರ ಮತ್ತು ಸಂಕಲ್ಪಗಳು ಸಡಿಲವಾಗಿದ್ದರಿಂದ ಪ್ರೇಕ್ಷಕರಿಗೆ ನಿರಾಸೆಯಾಗಿದೆ ಮತ್ತು ವಾಹಿನಿಗಳು ನಂಬಿಕೆಯನ್ನು ಕಳೆದುಕೊಂಡಿವೆ.

ಚಲನಚಿತ್ರಕ್ಕೆ ಹೇಗೆ ಯಶಸ್ಸಿನ ಸಿದ್ಧಸೂತ್ರ ಇಲ್ಲವೋ ಹಾಗೆಯೇ ವಾಹಿನಿಗಳ ಯಶಸ್ಸಿಗೂ ಯಾವುದೇ ಸಿದ್ಧಸೂತ್ರ ಲಭ್ಯವಿಲ್ಲ. ಯಾವುದು ಗೆಲ್ಲುತ್ತದೆ, ಯಾವುದು ತಿರಸ್ಕೃತವಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಅಂದಮಾತ್ರಕ್ಕೆ ನಮ್ಮ ಪ್ರಯತ್ನವನ್ನುನಿಲ್ಲಿಸಲು ಸಾಧ್ಯವಿಲ್ಲ. ಈ ಎಲ್ಲ ವಾಹಿನಿಗಳು ಮಾಡದೇ ಉಳಿಸಿರುವುದನ್ನು ಹೇಳಲು, ಉಳಿಸಿರುವುದಕ್ಕೆ ಬಿಟ್ಟ ಅನೇಕ ಗಂಭೀರ ವಿಷಯಗಳು, ಸತ್ಯಸಂಗತಿಗಳ ನಿಷ್ಠುರವಾದ, ನಿಖರವಾದ ಮಾಹಿತಿಗಳನ್ನು ಮನರಂಜನೆಯೊಂದಿಗೆ ನೀಡುವುದು ಪ್ರಸ್ತುತದ ಅನಿವಾರ್ಯ ಎಂಬುದು ಅಧ್ಯಯನದಿಂದ ಅರ್ಥವಾದ ಸತ್ಯ. ಈ ಸತ್ಯದ ಸಾಕ್ಷಾತ್ಕಾರದಲ್ಲಿ ವಿಶ್ವಂ ವೈಚಾರಿಕ ವಾಹಿನಿ ಕರ್ನಾಟಕದ ಮಾಧ್ಯಮ ಕ್ಷೇತ್ರದ ಹಿರಿಯ ಅನುಭವಿಗಳ ಅನುಭಾವದ ಅವತರಿಣಿಕೆಯ "ವಿಶ್ವಂ ಟಿವಿ".

ಅಪರಾಧದ ಸುದ್ದಿಗಳನ್ನು ವೈಭವೀಕರಿಸದೆ, ಮುಕ್ಕಾಲು ಮೂರುಪಾಲು ಸಿನಿಮಾಗಳ ಅವಲಂಬಿತವಾಗದೆ, ಹೇಳಿದ್ದನ್ನೇ ಹೇಳುತ್ತ, "ನಾವೇ ಮೊದಲು, ನಮ್ಮಲ್ಲೇ ಮೊದಲು" ಎನ್ನುವ ಸುದ್ದಿಯನ್ನು ಬಿತ್ತರಿಸದೆ, ನಮ್ಮ ಅಭಿಪ್ರಾಯಗಳನ್ನು ಬಲವಂತವಾಗಿ ಪ್ರೇಕ್ಷಕರ, ವೀಕ್ಷಕರ ಮೇಲೆ ಹೇರದೆ, ನಾವೇ ಬುದ್ಧಿವಂತರು ಎನ್ನುವ ಧೋರಣೆಯನ್ನು ತೋರದೆ, ಹೆದರಿಸದೆ, ಬೆದರಿಸದೆ, ವಸೂಲಿಗೆ ಇಳಿಯದೆ, ಅಪಭ್ರಂಶವನ್ನು ನುಡಿಯದೆ, ಸರಳವಾಗಿ, ಶುದ್ಧವಾಗಿ, ಸಂಕ್ಷಿಪ್ತವಾಗಿ, ಅತ್ಯಂತ ವಿನಯವಾಗಿ, ವಿನಮ್ರ ಭಾವದಿಂದ, ಸಂಶೋಧನಾತ್ಮಕವಾದ ಸತ್ಯಸಂಗತಿಯನ್ನು ಮನರಂಜನಾತ್ಮಕವಾಗಿ ಹೇಳುವ ಬದ್ಧತೆಯುಳ್ಳ ಸಂಕಲ್ಪ ಸ್ವರೂಪ "ವಿಶ್ವಂ ವೈಚಾರಿಕ ವಾಹಿನಿ". ಇದು ಯೋಗಕ್ಷೇಮ ಪ್ರೈವೇಟ್‌ ಲಿಮಿಟೆಡ್‌ನ ಹೆಮ್ಮೆಯ ಕೂಸು. ವಿಶ್ವಂ ವೈಚಾರಿಕ ವಾಹಿನಿಯ ವಿಶೇಷ...