ವಿಚಾರಿಸಿ
ಚಾಟ್ ಮಾಡಿ
ವಿಶ್ವಂ ಚಾನೆಲ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು, ದಯವಿಟ್ಟು ಸಂಪರ್ಕಿಸಿ: 9964502323 / ಇಮೇಲ್ : vishwammedia.tv@gmail.com

ಗ್ಯಾಲರಿ

ಕನ್ನಡ ವೈಚಾರಿಕ ಲೋಕಕ್ಕೆ ವಿಶ್ವಂ ಚಾನಲ್ ಪ್ರವೇಶ

ನವೆಂಬರ್ 23, 2025: ಕನ್ನಡ ಟಿವಿ ಲೋಕದಲ್ಲಿ ಸ್ಮರಣೀಯ ದಿನ. ವಿಶ್ವಂ ಹೆಸರಿನ ವಿನೂತನ ವೈಚಾರಿಕ ವಾಹಿನಿ ಕನ್ನಡದ ವೀಕ್ಷಕರಿಗೆ ಪರಿಚಯವಾದ ಶುಭದಿನ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಪಕ್ಕದಲ್ಲೇ ಇರುವ ವಿಶ್ವಂ ವಾಹಿನಿಯ ಕಚೇರಿಯಲ್ಲಿ ನ. 23 ರಂದು ಹಬ್ಬದ ವಾತಾವರಣ. ನಾನಾ ವಿಧದ ಬಣ್ಣಬಣ್ಣದ ಹೂಗಳು, ತಳಿರು ತೋರಣಗಳಿಂದ ಭರ್ಜರಿಯಾಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡ ಕಚೇರಿಯಲ್ಲಿ ಸಂಭ್ರಮದ ವಾತಾವರಣ…ಈ ಶುಭ ಸಂದರ್ಭದಲ್ಲಿ ಗಣ್ಯರು-ಮಹಾಮಾನ್ಯರು ನೂರಾರು ಸಂಖ್ಯೆಯಲ್ಲಿ ಭೇಟಿ ನೀಡಿ ಚಾನಲ್ ನ ಯಶಸ್ಸಿಗೆ ಶುಭ ಕೋರಿದ್ದು ವಿಶೇಷವೆನಿಸಿತು.

ಯೋಗಕ್ಷೇಮ ಮೀಡಿಯಾದ ಅಧ್ಯಕ್ಷ ಎಚ್.ಎಸ್.ನಾರಾಯಣಸ್ವಾಮಿ, ಎಂ.ಡಿ. ಶ್ರೀಮತಿ ವೀಣಾ ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮಚಂದ್ರ ರೆಡ್ಡಿ, ಕಾರ್ಯದರ್ಶಿ ಶ್ರೀಮತಿ ಮಮತಾ ಎನ್., ಕಾರ್ಯತಂತ್ರ ಮುಖ್ಯಸ್ಥರಾದ ಜಗದೀಶ್ ಗೌಡ ಮತ್ತು ಕೃಷ್ಣಮೂರ್ತಿ (ಕೇಬಲ್), ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಎಲ್.ಎನ್ ಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರು-ಆಪ್ತ ಸ್ನೇಹಿತರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಗೊಳ್ಳುವ ಮೂಲಕ ವಿಶ್ವಂ ವಾಹಿನಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು.

ಈ ವಿಶೇಷ ಸಂದರ್ಭದಲ್ಲಿ ಪೂಜ್ಯ ಸಂತೋಷ್ ಗುರೂಜಿ, ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಆನೇಕಲ್ ಶಾಸಕರಾದ ಬಿ.ಶಿವಣ್ಣ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮಾಜಿ ಸಚಿವ ಅರವಿಂದ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಕರ್ನಾಟಕ ಕೇಬಲ್ ಆಪರೇಟರ್ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು, ಸ್ಫೂರ್ತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್, ಯುವ ಸಮೂಹದ ಅಧ್ಯಕ್ಷ ಮಹೇಂದ್ರ ರೆಡ್ಡಿ, ಜಯ ಕರ್ನಾಟಕ ಸಂಘಟನೆಯ ಕಿರಣ್ ಕುಮಾರ್ ಮತ್ತು ಯೋಗಾನಂದ್, ಶ್ರೀನಿವಾಸ್, ಹಿರಿಯ ರಂಗಕರ್ಮಿಗಳು, ಕಲಾವಿದರು, ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳು ಮಹನೀಯರು ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶ್ವಂ ವಾಹಿನಿಯ ಸಿಬ್ಬಂದಿಗಳ ಉತ್ಸಾಹ ಇಮ್ಮಡಿಸಿತು. ಉದ್ಘಾಟನಾ ಸಮಾರಂಭ ವಿಶ್ವಂ ವಾಹಿನಿಯಲ್ಲಿ ನೇರಪ್ರಸಾರಗೊಂಡು ಲಕ್ಷಾಂತರ ವೀಕ್ಷಕರನ್ನು ತಲುಪಿದ್ದು ದಾಖಲೆಯೆನಿಸಿದೆ.

ಅತಿಥಿಗಳ ಆಗಮನದ ಹಿನ್ನೆಲೆಯಲ್ಲಿ ವಾಹಿನಿಯ ಸ್ಟುಡಿಯೋದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಲಾ ಪ್ರದರ್ಶನ ಎಲ್ಲರ ಮನ ಗೆದ್ದಿತು. ವಾಹಿನಿಯ ನೇರ ಪ್ರಸಾರಕ್ಕೆ ಅತಿಥಿಗಳು ಚಾಲನೆ ಕೊಟ್ಟ ನಂತರ ಅಧಿಕೃತ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಶುಭಾರಂಭ ದೊರೆಯಿತು.