ಕರ್ನಾಟಕದಲ್ಲಿ ದೂರದರ್ಶನದಿಂದ ಪ್ರಾರಂಭವಾದ ವಾಹಿನಿಗಳ ಚಟುವಟಿಕೆ ನಂತರದಲ್ಲಿ ಖಾಸಗಿ ವಾಹಿನಿಗಳ ಪೈಪೋಟಿಯೊಂದಿಗೆ ವಿಸ್ತಾರವಾಗಿ ವ್ಯಾಪಿಸಿಕೊಂಡಿತು. ಈಗ ಹಲವು ಹತ್ತು ವಾಹಿನಿಗಳು ಕನ್ನಡಿಗರ, ಕರ್ನಾಟಕದ ಮನೆಮನೆಯನ್ನು ಆವರಿಸಿಕೊಂಡಿವೆ. ವಾಹಿನಿಗಳು ತಾವು ಕಾರ್ಯನಿರ್ವಹಿಸುವ ವಸ್ತು-ವಿಷಯಗಳ ಆಧಾರದ ಮೇಲೆ ಪ್ರಾಕಾರಗಳಾಗಿ ವಿಭಜನೆಗೊಂಡಿವೆ. ಮನರಂಜನೆ, ಸುದ್ದಿ, ಸಿನಿಮಾ, ಕ್ರೀಡೆ, ವಾಣಿಜ್ಯ, ಸಂಗೀತ, ಮಹಿಳೆ, ಆಧ್ಯಾತ್ಮಿಕ ಎನ್ನವ ಪ್ರಮುಖ ವಿಭಾಗಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲವುಗಳ ಉದ್ದೇಶವೆಂದರೆ ಮಾಹಿತಿ ಮತ್ತು ಮನರಂಜನೆ.
ಮಾಹಿತಿ ಮತ್ತು ಮನರಂಜನೆಯನ್ನು ಒಂದೇ ಸೂರಿನಡಿಯಲ್ಲಿ ಒದಗಿಸುವ ಸಂಕಲ್ಪದಲ್ಲಿ ಭರವಸೆಯೊದಿಗೆ ಬರುತ್ತಿದೆ ವಿಶ್ವಂ ವೈಚಾರಿಕ ವಾಹಿನಿ. ಯೋಗಕ್ಷೇಮ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಅಂಗಸಂಸ್ಥೆಯಾದ ವಿಶ್ವಂ ಟೀವಿ ಮಾಹಿತಿ,ಮನರಂಜನೆಯನ್ನು ದಿನನಿತ್ಯದ ಹೂರಣವಾಗಿ, ಹಿತಮಿತವಾಗಿ, ಸಹಜವಾಗಿ, ಸತ್ಯವೇ ಆಗಿರುವ , ಶುದ್ಧ ಮಾಹಿತಿಯೊಂದಿಗೆ ಪ್ರೇಕ್ಷಕರಿಗೆ ತಲುಪಿಸುವ ಸಂಕಲ್ಪವನ್ನು ಮಾಡಿದೆ.
.png)